ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಅವರಿಗೆ ಸಿಂಧೂರ ಪ್ರಶಸ್ತಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಫೆಬ್ರವರಿ 5 , 2014
ಫ಼ೆಬ್ರವರಿ 5, 2014

ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಅವರಿಗೆ ಸಿಂಧೂರ ಪ್ರಶಸ್ತಿ

ವಿಟ್ಲ : ಮಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ವಿದ್ಯಾಲಯಗಳ ಸಹಯೋಗದಲ್ಲಿ ವಿಟ್ಲದ ಯಕ್ಷ ಸಿಂಧೂರ ಪ್ರತಿಷ್ಠಾನ(ಪ್ರಶಸ್ತಿ ವಿಜೇತ ತಂಡ)ದ ವತಿಯಿಂದ ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ವಿದ್ಯಾಲಯದಲ್ಲಿ ನಡೆದ ಯುವ ಸೌರಭ ಕಾರ್ಯಕ್ರಮದಲ್ಲಿ ಸಮ್ಮಾನ ಮತ್ತು ಯಕ್ಷಗಾನ ಬಯಲಾಟ ಜರುಗಿತು.

ಪ್ರಸಿದ್ಧ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಅವರನ್ನು ಸಿಂಧೂರ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ಪ್ರಶಸ್ತಿಯು ಶಾಲು, ಫಲತಾಂಬೂಲ, ಸಮ್ಮಾನ ಪತ್ರ, ಸ್ಮರಣಿಕೆ ಮತ್ತು ನಿಧಿಯನ್ನು ಒಳಗೊಂಡಿತ್ತು.

ಮುಳಿಯ ಶಾಲಾ ಅಧ್ಯಕ್ಷ ಕೋಡಿಜಾಲು ಗೋವಿಂದ ಭಟ್‌ ಅಧ್ಯಕ್ಷತೆ ವಹಿಸಿದ್ದರು. ರಾಮಕುಂಜ ಶ್ರೀ ರಾಮಕುಂಜೇಶ್ವರ ಪಪೂ ಕಾಲೇಜಿನ ಉಪನ್ಯಾಸಕ ಗಣರಾಜ ಕುಂಬ್ಳೆ ಅಭಿನಂದಿಸಿ, ಭಾಗವತಿಕರ, ಚೆಂಡೆ, ಮದ್ದಳೆಗಳೆಲ್ಲವನ್ನೂ ಅರಿತಿರುವ ಶಾಸ್ತ್ರಿ ಅವರು ಕಾರಣಲಯವನ್ನರಿತು ನಾಭಿಯಿಂದಲೇ ಹಾಡುವ ವಿಶಿಷ್ಟತೆ ಸಿದ್ಧಿಸಿದೆ. ಅಗರಿ ಮತ್ತು ಬಲಿಪರಿಗಿಂತ ಭಿನ್ನವಾದ ಶೈಲಿಯನ್ನು ಹೊಂದಿರುವ ಅವರು ನಿಜಾರ್ಥದ ಸೂತ್ರಧಾರಿಯಾಗಿದ್ದರು. ನಾದ ಮಾಧುರ್ಯದಿಂದ ಜನಮಾನಸದಲ್ಲಿ ಸ್ಥಾಯಿಯಾಗಿ ನೆಲೆಸಿದ್ದಾರೆ ಎಂದು ಹೇಳಿದರು.

ಅಭ್ಯಾಗತರಾಗಿ ವಿಠಲ ಪ್ರೌಢಶಾಲೆ ಉಪಪ್ರಾಂಶುಪಾಲ ಕಿರಣ್‌ ಕುಮಾರ್‌ ಬ್ರಹ್ಮಾವರ ಭಾಗವಹಿಸಿದ್ದರು. ಮುಖ್ಯೋಪಾಧ್ಯಾಯಿನಿ ಸೀತಾಲಕ್ಷ್ಮೀ, ಪ್ರತಿಷ್ಠಾನದ ಸಲಹಾ ಸಮಿತಿ ಸದಸ್ಯ ದಯಾನಂದ ಸಾಯ, ವಿಶ್ವಸ್ಥರಾದ ರತ್ನಾವತಿ ಎಸ್‌.ಭಟ್‌ ಉಪಸ್ಥಿತರಿದ್ದರು.

ಶಿಕ್ಷಕಿ ಜಯಲಕ್ಷ್ಮೀ ಸ್ವಾಗತಿಸಿ, ಹರೀಶ ಬಳಂತಿಮೊಗರು ಪ್ರಸ್ತಾವನೆಗೈದು ವಂದಿಸಿದರು. ಪ್ರಭಾ ಚಣಿಲ ಕಾರ್ಯಕ್ರಮ ನಿರ್ವಹಿಸಿದರು.

ಬಳಿಕ ಯಕ್ಷಸಿಂಧೂರ ಪ್ರತಿಷ್ಠಾನದ ಸಂಚಾಲಕ ಚಣಿಲ ಸುಬ್ರಹ್ಮಣ್ಯ ಭಟ್‌ ನೇತೃತ್ವದಲ್ಲಿ ಶಿವಭಕ್ತ ವೀರಮಣಿ ಯಕ್ಷಗಾನ ಬಯಲಾಟ ನಡೆಯಿತು.

ಕೃಪೆ : http://www.udayavani.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ